ಮಂಗಳ
	ಸೌರವ್ಯೂಹದ ಗ್ರಹಗಳ ಪೈಕಿ ಒಂದು (ಮಾರ್ಸ್). ಸೂರ್ಯನಿಂದ ಆರೋಹಿದೂರಾನುಸಾರ ನಾಲ್ಕನೆಯದು. ಅಂಗಾರಕ, ಕುಜ ಎಂಬ ಹೆಸರುಗಳೂ ಇವೆ. ಗ್ರಹದ ಸ್ವರೂಪ, ಮೇಲ್ಮೈಲಕ್ಷಣ, ಭೌತವೃತ್ತಾಂಶ, ಜ್ಯೋತಿಷ್ಯ ವೃತ್ತಾಂಶ ಮೊದಲಾದವನ್ನು ಕುರಿತ ಸ್ಥೂಲವಿವರಗಳನ್ನು ಅಂಗಾರಕ (ನೋಡಿ- ಅಂಗಾರಕ) ಲೇಖನದಲ್ಲಿ ತಿಳಿಸಿದೆ. ಗ್ರಹಕ್ಕೆ ಸಂಬಂಧಿಸಿದಂತೆ ಇತರ ವಿವರಗಳನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಿದೆ.

ಗ್ರಹ ವರ್ಗೀಕರಣದ ರೀತ್ಯ ಮಂಗಳ ಉಚ್ಚ (ಸುಪೀರಿಯರ್) ಗ್ರಹಗಳ ಪೈಕಿ ಒಂದು. ಭೂಮಿಯನ್ನು ಕುರಿತಂತೆ ಖಗೋಳದಲ್ಲಿ ಸೂರ್ಯವಿಮುಖಸ್ಥಾನದಲ್ಲಿ ಗ್ರಹ ಇದ್ದಾಗ ಅದರ ಸ್ಪಷ್ಟ ವೀಕ್ಷಣೆ ನಡೆಯಬಹುದು. ಇಂಥ ಸಂಧರ್ಭಗಳಲ್ಲಿ ಅದು ಇರುಳಿನ ಆಕಾಶದಲ್ಲಿ ಇತರ ಸಾಮಾನ್ಯ ಸಂದರ್ಭಗಳಿಗಿಂತಲೂ

1977-2000 ಅವಧಿಯಲ್ಲಿ ಗ್ರಹದ ವಿಯುತಿ ದಿನಾಂಕಗಳು

ತಾರೀಖು
ಭೂಮಿಗೆ ಅತ್ಯಂತ ಸಮೀಪ ಬಂದ ತಾರೀಖು
ತೋರ್ಕೆ ವ್ಯಾಸ (ಸೆಕೆಂಡುಗಳಲ್ಲಿ)
ಭೂಮಿಯಿಂದ ದೂರದಶಲಕ್ಷ ಕಿಮೀ.
ಕಾಂತಿಮಾನ
ಹಿನ್ನೆಲೆ ರಾಶಿ

22-1-78
19-1-78
14.3
97.7
-1.1
ಮಿಥುನ ಕರ್ಕಾಟಕ

25-2-80
26-2-80
13.8
101
-1
ಸಿಂಹ

31-3-82
5-4-82
14.7
95.1
-1.8
ಕನ್ಯಾ

11-5-84
19-5-84
17.5
79.7
-1.8
ತುಲಾ

10-7-86
16-7-86
23.7
60.5
-2.4
ಧನು

28-9-88
22-9-88
23.7
58.9
-2.6
ಮೀನ

27-11-90
20-11-90
17.9
77.4
-1.7
ವೃಷಭ

7-1-93
3-1-93
14.9
93.7
-1.2
ಮಿಥುನ

12-2-95
11-2-95
13.8
101.2
-1
ಸಿಂಹ

17-3-97
20-3-97
14.7
98.6
-1.1
ಕನ್ಯಾ

24-4-99
1-5-99
16.2
86.6
-1.5
ಕನ್ಯಾ

ಅಧಿಕ ಸ್ಫುಟವಾಗಿ ಗೋಚರಿಸುತ್ತದೆ. ಗ್ರಹದ ಅತ್ಯಂತ ಸಮೀಪ ವಿಯುತಿ (ಅಪೊಸಿಷನ್) ಅದು ತನ್ನ ಕಕ್ಷೆಯ ಪುರರವಿಬಿಂದುವಿನಲ್ಲಿ (ಪೆರಿಹೀಲಿಯನ್) ಇದ್ದಾಗ ಘಟಿಸುತ್ತದೆ. (1988 ಸೆಪ್ಟೆಂಬರ್ ತಿಂಗಳಲ್ಲಿ ಘಟಿಸಲಿದೆ). ಆ ಭೂಮಿ-ಮಂಗಳ ಅಂತರ 58,900,000 ಕಿಮೀ. ಹಿಂದೆ 1971 ಆಗಸ್ಟಿನಲ್ಲಿ ಇದೇ ಸನ್ನಿವೇಶ ತಲೆದೋರಿದ್ದಾಗ ಭೂಮಿ-ಮಂಗಳ ಅಂತರ 56,200,000 ಕಿಮೀ ಆಗಿತ್ತು. ಉಚ್ಚಯುತಿಯ (ಸುಪೀರಿಯರ್ ಕಂಜಂಕ್ಷನ್) ಸಂದರ್ಭದಲ್ಲಿ ಗ್ರಹ ಭೂಮಿಯಿಂದ 400,000,000 ಕಿಮೀ ದೂರದಲ್ಲಿರುತ್ತದೆ. ಎರಡು ಕ್ರಮಾಗತ ವಿಯುತಿಗಳ ನಡುವಿನ ದೀರ್ಘತಮ ಅವಧಿ 810 ದಿವಸಗಳು. ಹ್ರಸ್ವತಮ ಅವಧಿ 764 ದಿವಸಗಳು. ಕನಿಷ್ಠ ಅನುಕೂಲಕರ ವಿಯುತಿಗಳು 1980ರಲ್ಲಿ, ಗ್ರಹ ಭೂಮಿಯಿಂದ 101,320,000 ಕಿಮೀ ದೂರದಲ್ಲಿದ್ದಾಗ (ಕನಿಷ್ಠ) ಘಟಿಸಿದ್ದುವು.
	ಮಂಗಳದ ಆವರ್ತನಾವಧಿ 24 ಗಂ 37 ಮಿ 22.6 ಸೆ. ಇದಕ್ಕೆ ಸಾಲ್ ಎಂದು ಹೆಸರು. ಇದು ಸರಿಸುಮಾರು ಭೂಮಿಯದರಷ್ಟೇ. ಇದರಿಂದ ದಿವಸದಿಂದ ದಿವಸಕ್ಕೆ ಕಾಲ ಸಂದಂತೆಲ್ಲ ಒಂದು ನಿರ್ದಿಷ್ಟ ಸಮಯದಲ್ಲಿ ಗ್ರಹದ ಒಂದೇ ಮುಖ ಭೂಮಿಯೆಡೆಗೆ ಇರುತ್ತದೆ. ಗ್ರಹದ ಮೇಲ್ಮೈಯ ಪ್ರತಿಯೊಂದು ದೃಶ್ಯವೂ 100ಯಷ್ಟು ಹಿಂದಕ್ಕೆ ಸರಿದಿರುತ್ತದೆ. ಈ ದೃಶ್ಯಾವಳಿಗಳು ತಮ್ಮ ತೋರ್ಕೆ ಹಿಮ್ಮೊಗ ಚಲನೆಯನ್ನು ಸುಮಾರು 38 ದಿವಸಗಳಲ್ಲಿ ಮುಗಿಸಿರುತ್ತವೆ ಮತ್ತು ದೃಶ್ಯಾವಳಿಗಳ ಪುನರಾವರ್ತನೆಯೂ ಆಗಿರುತ್ತದೆ.
	ಗ್ರಹದ ಸಮಭಾಜಕ ಮತ್ತು ಕಕ್ಷಾತಲಗಳ ನಡುವಿನ ಕೋನ ಸರಿಸುಮಾರು ಭೂಮಿಯ ಸಮಭಾಜಕ ಮತ್ತು ಕ್ರಾಂತಿವೃತ್ತತಲಗಳ ನಡುವಿನ ಕೋನದಷ್ಟೇ. ಗ್ರಹಾಕ್ಷದ ಉತ್ತರಕೊನೆ ಆಲ್ಫಸೀಪಿ ನಕ್ಷತ್ರದ ಅಸುಪಾಸಿನತ್ತ ನಿರ್ದೇಶಿತವಾಗಿದೆ.

ಗ್ರಹವನ್ನು ಕುರಿತ ಕೆಲವು ವಿವರಗಳು
ಸೂರ್ಯನಿಂದ ಸರಾಸರಿ ದೂರ			.......... 		227.94 ದಲಕಿಮೀ
ಸೂರ್ಯನಿಂದ ಗರಿಷ್ಠ ದೂರ			..........		241.1 ದಲಕಿಮೀ	
ಸೂರ್ಯನಿಂದ ಕನಿಷ್ಠ ದೂರ			..........		206.7 ದಲಕಿಮೀ
ನೌಕ್ಷತ್ರಿಕ ಅವಧಿ					..........		686.98 ದಿವಸಗಳು
ಸಂಯುತಿ ಅವಧಿ					..........		779.9 ದಿವಸಗಳು
ಆವರ್ತನಾವಧಿ					..........		24 ಗಂ 37 ಮಿ 22.6 ಸೆ.
ಸರಾಸರಿ ಕಕ್ಷಾವೇಗ					..........		24.1 ಕಿಮೀ/ಸೆ
ಕಕ್ಷೆಯ ಬಾಗು					..........		1(5(59(.4
ಕಕ್ಷಾತಲದ ಉತ್ಕೇಂದ್ರತೆ				..........		0.093
ಗ್ರಹವ್ಯಾಸ						..........		6787 ಕಿಮೀ
ಭೂಮಿಯಿಂದ ತೋರ್ಕೆ ಕೋನವ್ಯಾಸ			..........		25(.7(ಗರಿಷ್ಠ)
	3.(5(ಕನಿಷ್ಠ) 
ಗಾತ್ರ (ಭೂಮಿ = 1)				..........		1 : 0.15
ವ್ಯುತ್ಕ್ರಮ ರಾಶಿ, ಸೂರ್ಯ				..........		1 : 3098700
ಸಾಂದ್ರತೆ (ನೀರು=1)				..........		1 : 3.94
ವಿಮೋಚನ ವೇಗ					..........		5 : 03 ಕಿಮೀ/ಸೆ
ಮೇಲ್ಮೈಸಾಂದ್ರತೆ (ಭೂಮಿ=1)			..........		1 : 0.38
ಮಾಧ್ಯ ಮೇಲ್ಮೈ ಉಷ್ಣತೆ				..........		-230ಅ
ಆಲ್ಬಿಡೋ					..........		0.16	
ಗರಿಷ್ಠ ಕಾಂತಿಮಾನ				..........		-2.8
ಉಪಗ್ರಹಗಳ ಸಂಖ್ಯೆ				..........		2	

	ಭೂಮಿಯ ಧ್ರುವಗಳಂತೆ ಮಂಗಳದ ಧ್ರುವಗಳೂ ಗ್ರಹದ ಕಕ್ಷಾಚಲನೆಯಲ್ಲಿ ಸೂರ್ಯನಿಗೆ ಪರ್ಯಾಯವಾಗಿ ಮುಖಮಾಡಿಕೊಂಡಿರುತ್ತವೆ. ಜ್ಯಾಮಿತೀಯವಾಗಿ ಮಂಗಳಋತುಗಳು ಭೂಮಿಯನ್ನೇ ಹೋಲುತ್ತವಾದರೂ ಅವುಗಳ ಅವಧಿ ಭೂಋತುಗಳ ಅವಧಿಯ ಸುಮಾರು ಎರಡು ಪಟ್ಟು. ಗ್ರಹ ಪುರರವಿಬಿಂದುವಿನ ಸಮೀಪ ಇರುವಾಗ ಅದರ ದಕ್ಷಿಣಗೋಳಾರ್ಧದಲ್ಲಿ ಬೇಸಗೆ. ಆದ್ದರಿಂದ ಗ್ರಹದ ದಕ್ಷಿಣಗೋಳಾರ್ಧದಲ್ಲಿಯ ವಾಯುಗುಣದಲ್ಲಿ ಉತ್ತರಗೋಳಾರ್ಧದಲ್ಲಿಯದಕ್ಕಿಂತಲೂ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತದೆ. ಗ್ರಹದಲ್ಲಿ ಕಡಲು ಇಲ್ಲದಿರುವುದರಿಂದಲೂ ಕಕ್ಷಾತಲದ ಅಧಿಕ ಬಾಗಿನಿಂದಲೂ ಈ ತೆರನಾದ ಪರಿಣಾಮ ತಲೆದೋರುತ್ತದೆ. ಅಪರವಿಬಿಂದುವಿನ ಸಮೀಪದಲ್ಲಿ ಗ್ರಹ ಇರುವಾಗ ಒದಗುವ ಸೌರವಿಕಿರಣಕ್ಕಿಂತಲೂ 44%ರಷ್ಟು ಅಧಿಕ ವಿಕಿರಣವನ್ನು ಗ್ರಹ ಪುರರವಿಬಿಂದುವಿನಲ್ಲಿದ್ದಾಗ ಪಡೆಯುತ್ತದೆ.

	ಗ್ರಹದ ವಾಯುಮಂಡಲ ಶುಕ್ರಗ್ರಹದ್ದರಂತೆ ಪ್ರಮುಖವಾಗಿ ಕಾರ್ಬನ್ ಡೈಆಕ್ಸೈಡಿನಿಂದ ಕೂಡಿದೆ. ಕೆಲವು ಸಂದರ್ಭಗಳಲ್ಲಿ ಭೂವಾಯುಮಂಡಲವನ್ನು ಹೋಲುವುದುಂಟು. ಫ್ರೆಂಚ್ ಖಗೋಳವಿe್ಞÁನಿ ಎಚ್.ಫ್ಲೋಗರ್ ಗ್ಯೂ ಎಂಬಾತ ಗ್ರಹದ ಮೇಲೆ ಮೋಡಗಳು ಇರುವುದರ ಬಗ್ಗೆ ಮುನ್ನುಡಿದಿದ್ದ (1811). ನೈಟ್ರೊಜನ್, ಆಕ್ಸಿಜನ್, ಆರ್ಗಾನ್ ಅನಿಲಗಳು ತೀರ ವಿರಳ ಪರಿಮಾಣಗಳಲ್ಲಿವೆ. ಎರಡು ಬಗೆಯ ಮೋಡಗಳನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ: ಹಳದಿಮೋಡಗಳು, ಬಿಳಿಮೋಡಗಳು. ಬಿಳಿಮೋಡಗಳನ್ನು ಖಗೋಳವಿe್ಞÁನಿ ಸೆಕೀ ಎಂಬವ 1858ರಲ್ಲಿ ವೀಕ್ಷಿಸಿದ್ದ. ಹಳದಿ ಮೋಡಗಳು ಇಡೀ ಗ್ರಹವನ್ನು ವ್ಯಾಪಿಸಿಕೊಂಡಿವೆ. ವಾಯುಬೀಸಿದ್ದರಿಂದ ಉಂಟಾದ ಧೂಳಿನಿಂದ ಇವು ಕೂಡಿವೆ. ಎತ್ತರ ಪ್ರದೇಶಗಳಲ್ಲಿ ರೂಪುಗೊಳ್ಳುವ ಬಿಳಿ ಮೋಡಗಳಲ್ಲಿ ಮುಖ್ಯವಾಗಿ ಕಾರ್ಬನ್ ಡೈಆಕ್ಸೈಡ್ ಇದೆ. ಗ್ರಹದ ಮೇಲಿನ ಪ್ರಾತರಂತ್ಯಕಾರಿಯ (ಮಾರ್ನಿಂಗ್ ಟರ್ಮಿನೇಟರ್) ಆಸುಪಾಸಿನಲ್ಲಿ ಬಿಳಿ ಮೋಡಗಳು ಕಾಣಿಸಿಕೊಂಡು ಕ್ರಮೇಣ ಬಿಸಿಲಿನ ತಾಪಕ್ಕೆ ನಶಿಸಿಹೋಗುತ್ತವೆ. ವಾಯುಮಂಡಲದ ಉನ್ನತ ಪ್ರದೇಶಗಳಲ್ಲಿಯ ಮೋಡಗಳಿಗೆ ಗ್ರಹದ ಅಲ್ಪ ಮೇಲ್ಮೈಗುರುತ್ವವೇ ಕಾರಣ. ವಾಯುಮಂಡಲದಲ್ಲಿಯ ನೀರಿನ ಪರಿಮಾಣ ವಾಯುಮಂಡಲದ್ದರ 1/1000 ರಷ್ಟು ಮಾತ್ರ. ಇದು ಮೋಡವಾಗಿ ಮೈದಳೆದು ಎತ್ತರ ಪ್ರದೇಶಗಳಲ್ಲಿ ಚಲಿಸುವುದನ್ನು ಇಲ್ಲವೆ ಜ್ವಾಲಾಮುಖಿಗಳ ಇಳಿಜಾರುಗಳಲ್ಲಿ ಅಡ್ಡಾಡುವುದನ್ನು ಕಾಣಬಹುದು. ಗ್ರಹದ ಮೇಲ್ಮೈಯಿಂದ ಸುಮಾರು 50ಕಿಮೀ ಎತ್ತರಕ್ಕಿಂತ ಮೇಲಿನ ವಾಯುಮಂಡಲದ ಸಾಂದ್ರತೆ ಭೂವಾಯುಮಂಡಲದ ಸಾಂದ್ರತೆಯದಕ್ಕಿಂತಲೂ ಅಧಿಕ. ಈ ಕಾರಣದಿಂದ ಎತ್ತರದ ಮೋಡಗಳು ಅಲ್ಲಿ ಇರುವುದು ಸಾಧ್ಯ. ಸೌರವಿಕಿರಣದ ಉಂಟಾದ ಗ್ರಹದ ಅಯಾನ್‍ಗೋಳ ಭೂಮಿಯದಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿದೆ. ಗ್ರಹದ ಅಯಾನ್‍ಗೋಳ ಮತ್ತು ಸೌರಮಾರುತಗಳ ನಡುವೆ ಆಗುವ ಅಂತರಕ್ರಿಯೆಯಿಂದ ಉಂಟಾಗುವ ಜಾಪಧಕ್ಕೆ (ಬೋಷಾಕ್) ಬಲು ಕಡಿಮೆ ಸಾಮಥ್ರ್ಯದ್ದು. ಗ್ರಹಕ್ಕೆ ಗಮನಾರ್ಹವಾದ ಕಾಂತಕ್ಷೇತ್ರ ಇಲ್ಲ.

	ಸರಿಸುಮಾರು ಭೂವಾಯುಮಂಡಲವನ್ನು ಹೋಲುವಂತೆಯೇ ಇರುವ ಗ್ರಹದ ವಾಯುಮಂಡಲ, ಗ್ರಹಾಕ್ಷದ ಬಾಗು ಇತ್ಯಾದಿಗಳು ಭೂಮಿಯ ಮೇಲೆ ಇರುವಂತೆಯೇ ಗ್ರಹ ವಾಯುಗುಣದಲ್ಲಿಯ ಬದಲಾವಣೆಗಳಿಗೆ ಕಾರಣ ಧ್ರುವಪ್ರದೇಶಗಳಲ್ಲಿಯ ಹಿಮನಿಕ್ಷೇಪಗಳು ರೂಪುಗೊಳ್ಳುವ ಹಾಗೂ ಅದೃಶ್ಯವಾಗುವ ವಿದ್ಯಮಾನಗಳು ಪರ್ಯಾಯವಾಗಿ ನಡೆಯುತ್ತಿರುತ್ತವೆ. ಈ ಧ್ರುವೀಯ ಟೊಪ್ಪಿಗೆಗಳು ಮಂಜುಗೆಡ್ಡೆ ಮತ್ತು ಹಿಮದಿಂದ ಆವೃತವಾಗಿರುವುದರ ಬಗ್ಗೆ ಖಗೋಳವಿe್ಞÁನಿ ವಿಲಿಯಮ್ ಹರ್ಷೆಲ್ 1777-83ರ ನಡುವಿನ ಅವಧಿಯಲ್ಲಿ ದೂರದರ್ಶಕದ ಮೂಲಕ ವೀಕ್ಷಿಸಿ ಮುನ್ನುಡಿದಿದ್ದ. ವಾಯುಮಂಡಲದ ಸಮ್ಮಿಶ್ರಣ ಆಗುತ್ತದೆ ಮಾತ್ರವಲ್ಲದೆ ಸೌರತಾಪನ ಮತ್ತು ಕೋರಿಯೋಲಿಸ್ ಪರಿಣಾಮದ ಆಧಾರದ ಮೇಲೆ ಮುನ್ನುಡಿದಿರುವಂತೆಯೇ ಮಾರುತಗಳು ದಿಸೆಗಳನ್ನು ಬದಲಾಯಿಸುತ್ತವೆ ಕೂಡ. ಮಾರುತಗಳ ವೇಗ ಬಲು ಅಧಿಕವಾಗಿದ್ದು ಒಮ್ಮೊಮ್ಮೆ ಅತಿಶಬ್ದದ (ಸೂಪರ್‍ಸಾನಿಕ್)

ನೌಕೆಯ ಹೆಸರು
ಉಡಾವಣಾ ತಾರೀಕು
ಸಮಾಗಮ ತಾರೀಕು
ಗ್ರಹಸಾಮೀಪ್ಯ ದೂರ (ಕಿಮೀ)
ಷರಾ

ಮಾರ್ಸ್ (ಸೋಮಿಯತ್ ರಷ್ಯ)
1-11-62
?
190,000 (?)
ಭೂಮಿಯಿಂದ 106,000,000ಕಿಮೀ ದೂರದಲ್ಲಿ ಸಂಪರ್ಕ ತಪ್ಪಿ ಹೋಯಿತು.

ಮ್ಯಾರಿನರ್ 3(ಅಸಂಸಂ)
5-11-64
__
__
ಸೌರಕಕ್ಷೆಯಲ್ಲಿ, ಉಡಾವಣೆ ಆದ ಒಡನೆಯೆ ಸಂಪರ್ಕ ತಪ್ಪಿ ಹೋಯಿತು.

ಮ್ಯಾರಿನರ್ 4 (ಅಸಂಸಂ)
28-11-64
14-7-65
10,000
ಯಶಸ್ವಿಯಾಯಿತು. ಗ್ರಹದ 22 ಚಿತ್ರಗಳು ಮತ್ತಿತರ ದತ್ತಾಂಶಗಳ ರವಾನೆ.

ಜೊóೀಂಡ್ 2 (ಸೋವಿಯತ್ ರಷ್ಯ)
30-11-64
ಆಗಸ್ಟ್ 65 (?)
(?)
1965 ಮೇ 2ರಂದು ಸಂಪರ್ಕ ತಪ್ಪಿಹೋಯಿತು.

ಮ್ಯಾರಿನರ್ 6 (ಅಸಂಸಂ)
24-2-69
31-7-69
3,390
ಗ್ರಹದ ಸಮಭಾಜಕ ಪ್ರದೇಶದ ಮೇಲೆ ಹಾರಾಟ. ಭೂಮಿಗೆ 76 ಚಿತ್ರಗಳ ರವಾನೆ.

ಮ್ಯಾರಿನರ್ 7 (ಅಸಂಸಂ)
27-3-69
4-8-69
3,500
ಗ್ರಹದ ದಕ್ಷಿಣ ಗೋಳಾರ್ಧದ ಮೇಲೆ ಹಾರಾಟ. ಭೂಮಿಗೆ 126 ಚಿತ್ರಗಳ ರವಾನೆ.

ಮ್ಯಾರಿನರ್ 8 (ಅಸಂಸಂ)
8-5-71
__
__
ಸಂಪೂರ್ಣ ವಿಫಲ. ಉಡಾವಣೆಯಾದ ಒಡನೆಯೆ ಅಟ್ಲಾಂಟಿಕ್ ಸಮುದ್ರದೊಳಕ್ಕೆ ಬಿತ್ತು.

ಮಾರ್ಸ್ 2 (ಸೋವಿಯತ್ ರಷ್ಯ)
19-5-71
27-11-71
ಗ್ರಹದ ಮೇಲೆ ಇಳಿಯಿತು
ನೌಕೆಯ ಆರ್ಬೈಟರ್ ಮಂಗಳದ ಕಕ್ಷೆ ತಲುಪಿತು. ಇಳಿಭಾಗ ಗ್ರಹಮೇಲ್ಮೈ ಮೇಲೆ ಅಪ್ಪಳಿಸಿ ನಾಶವಾಯಿತು.

ಮಾರ್ಸ್ 3 (ಸೋವಿಯತ್ ರಷ್ಯ)
28-5-71
2-10-71
ಗ್ರಹದ ಮೇಲೆ ಇಳಿಯಿತು
ನೌಕೆಯ ಆರ್ಬೈಟರ್ ಭಾಗ ದತ್ತಾಂಶವನ್ನು ಭೂಮಿಗೆ ರವಾನಿಸಿತು. ಇಳಿಭಾಗ ಬಂದಿಳಿದ 20 ಸೆಕೆಂಡುಗಳ ಅನಂತರ ಸಂಪರ್ಕ ಕಳೆದುಕೊಂಡಿತು. ಯಾವ ಉಪಯುಕ್ತ ದತ್ತಾಂಸವೂ ಇಲ್ಲ.

ಮ್ಯಾರಿನರ್ 9 (ಅಸಂಸಂ)
30-5-71
13-11-71
1,395
ನೌಕೆಯ ಆರ್ಬೈಟರ್ ಭೂಮಿಗೆ 7329 ಚಿತ್ರಗಳನ್ನು ರವಾನಿಸಿತು.

ಮಾರ್ಸ್ 4 (ಸೋವಿಯತ್ ರಷ್ಯ)
21-7-73
10-2-74
?
ಗ್ರಹಕಕ್ಷೆ ತಲುಪಲು ವಿಫಲವಾಯಿತು. ಗ್ರಹವನ್ನು ಸಮೀಪಿಸಲಾಗಲಿಲ್ಲ.

ಮಾರ್ಸ್ 5 (ಸೋವಿಯತ್ ರಷ್ಯ)
25-7-73
12-2-74
?
ಗ್ರಹಕಕ್ಷೆ ಸೇರಿತು.

ಮಾರ್ಸ್ 6 (ಸೋವಿಯತ್ ರಷ್ಯ)
5-7-73
12-3-74
ಗ್ರಹದ ಮೇಲೆ ಇಳಿಯಿತು
ಗ್ರಹದ ನೆಲವನ್ನು ಮುಟ್ಟಿದೊಡನೆಯೆ ಸಂಪರ್ಕ ತಪ್ಪಿಹೋಯಿತು.

ಮಾರ್ಸ್ 7 (ಸೋವಿಯತ್ ರಷ್ಯ)
9-7-73
9-3-74
?
ಗ್ರಹಕಕ್ಷೆ ತಲಪಲು ವಿಫಲವಾಯಿತು. ಗ್ರಹವನ್ನು ಸಮೀಪಿಸಲಾಗಲಿಲ್ಲ.

ವೈಕಿಂಗ್ 1 (ಅಸಂಸಂ)
20-8-75
19-6-76 (ಕಕ್ಷೆಯಲ್ಲಿ)
ಗ್ರಹದ ಮೇಲೆ ಇಳಿಯಿತು
20-7-76ರಂದು ಗ್ರಹದ ಮೇಲೆ ಇಳಿಯಿತು.

ವೈಕಿಂಗ್ 2 (ಅಸಂಸಂ)
9-9-75
7-8-76 (ಕಕ್ಷೆಯಲ್ಲಿ)
ಗ್ರಹದ ಮೇಲೆ ಇಳಿಯಿತು
3-9-76ರಂದು ಗ್ರಹದ ಮೇಲೆ ಇಳಿಯಿತು.

ಆಳವಿಗೂ ಬರಬಹುದು. ಮಾರುತಗಳ ಬರತ ಇಳಿತಗಳಿಂದ ಉನ್ನತವಾಯುಮಂಡಲ ಪ್ರಭಾವಗೊಳ್ಳುತ್ತದೆ. ಗ್ರಹದ ಸಮಭಾಜಕದ ಪ್ರದೇಶದಲ್ಲಿ ಉಷ್ಣತೆ ಕೆಲವೊಮ್ಮೆ ನೀರು ಘನೀಭವಿಸುವ ಉಷ್ಣತೆಯನ್ನು ಮೀರುವುದುಂಟು. ಸಾಮಾನ್ಯವಾಗಿ ಮಂಗಳ ಶೈತ್ಯ ಗ್ರಹ. 

ಗ್ರಹಋತುಗಳ ಅವಧಿಗಳು
						ದಿವಸಗಳು	ಸಾಲ್‍ಗಳು
	ದಗೋ ವಸಂತ (ಉಗೋ ಶರದೃತು)		146		142
	ದಗೋ ಬೇಸಗೆ (ಉಗೋ ಚಳಿಗಾಲ)		160		156 
	ದಗೋ ಶರದೃತು (ಉಗೋ ವಸಂತ)		199		194 	 
	ದಗೋ ಚಳಿಗಾಲ (ಉಗೋ ಬೇಸಗೆ)		182		177 
						687		669
ದಗೋ = ದಕ್ಷಿಣ ಗೋಳಾರ್ಧ ; ಉಗೋ = ಉತ್ತರ ಗೋಳಾರ್ಧ	 

	ಭೂವಾಯುಮಂಡಲ ನಿರ್ಮಲವಾಗಿದ್ದು, ಗ್ರಹ ಅನುಕೂಲಕರ ವಿಯುತಿಸ್ಥಾನದಲ್ಲಿದ್ದಾಗ ಭೂಮಿಯಿಂದ ದೂರದರ್ಶನದ ಮೂಲಕ ಗ್ರಹವೀಕ್ಷಣೆ ನಡೆಸುವುದು ಬಲುಯುಕ್ತ. ಸಾಕಷ್ಟು ಪ್ರವರ್ಧನ ಹಾಗೂ ವಿಘಟನಸಾಮಥ್ರ್ಯ ಹೊಂದಿರುವ ದೂರದರ್ಶನದ ಮೂಲಕ, ಇಂಥ ಪರಿಸ್ಥಿತಿಯಲ್ಲಿ ಗ್ರಹವೀಕ್ಷಣೆ ನಡೆಸಿದರೆ ಅದು ಮಸಕು ಕೆಂಪು ಬಣ್ಣದ್ದಾಗಿ ಕಾಣುತ್ತದೆ. ಗ್ರಹದ ಧ್ರುವೀಯ ಭಾಗಗಳು ಬೆಳ್ಳಗೆ ಕಂಡರೆ ಸಮಭಾಜಕೀಯ ಪ್ರದೇಶಗಳು ಕಪ್ಪಾದ ರಚನೆಗಳಿಂದ ಕೂಡಿರುವಂತೆ ಕಾಣುತ್ತವೆ. ಅನುಕೂಲಕರ ಪರಿಸ್ಥಿತಿಯೊಂದು ಒದಗಿದ್ದ ವೇಳೆ (1877) ಇಟಲಿಯ ಖಗೋಳವಿe್ಞÁನಿ ಜಿಯೋವಾನಿ ಸ್ಕಯಾಪರೆಲ್ಲೀ (1835-1910) ಎಂಬವ ಗ್ರಹದ ಈ ತೋರ್ಕಿ ಲಕ್ಷಣಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಿದ್ದ ಗ್ರಹದ ಮೇಲೆ ಕಪ್ಪಾಗಿ ಕಾಣುವ ರೇಖಾ ರಚನೆಗಳನ್ನು ಈತ ವೀಕ್ಷಿಸಿ ಅವನ್ನು ಕಾಲುವೆಗಳೆಂದೇ (ಇಟಾಲಿಯನ್ ಭಾಷೆಯಲ್ಲಿ ಕೆನಾಲಿ-ಕಡಲ್ಗಾಲುವೆ, ಆದರೆ ಇಂಗ್ಲೀಷಿನಲ್ಲಿ ಕೆನಾಲ್ ಆಯಿತು) ಭಾವಿಸಿದ. ಈತನ ಊಹೆಯನ್ನು ಜನ ತಪ್ಪಾಗಿ ಭಾವಿಸಿಕೊಂಡು, ಅವು ಗ್ರಹದಲ್ಲಿಯ ಬುದ್ಧಿವಂತಜನ ನೀರಾವರಿ ಕೆಲಸಗಳಿಗಾಗಿ ಮಾಡಿಕೊಂಡಿರುವ ಕಾಲುವೆಗಳೇ (ಕೆನಾಲ್ಸ್) ಇರಬೇಕು ಎಂದು ತೀರ್ಮಾನಿಸಿದ್ದರು. ಕಾಲುವೆಗಳು ಆವಿಷ್ಕಾರವಾದ ಒಂದು ಶತಮಾನ ಪರ್ಯಂತವೂ ಮಂಗಳದಲ್ಲಿ ಬುದ್ಧಿವಂತ ಜೀವಿಗಳು ಇರುವ ವಿಚಾರ ವಾಸ್ತವವೆಂಬಂತೆಯೇ ಉಳಿಯಿತು. ಆದರೆ ಗ್ರಹವನ್ನು ಕುರಿತು ಆಗಿರುವ ಈಗಿನ ಅನ್ವೇಷಣೆಗಳಿಂದ ಈ ಭಾವನೆ ಸುಳ್ಳಾಗಿದೆ.

	ಮಂಗಳದ ಮೇಲಿರುವ ಕುಳಿಗಳನ್ನು ಬರ್ನಾರ್ಡ್, ಮೆಲ್ಲಿಷ್ ಮೊದಲಾದ ಖಗೋಳವಿe್ಞÁನಿಗಳು ದೂರದರ್ಶಕದ ಮೂಲಕ ವೀಕ್ಷಿಸಿದ್ದಾರೆ. ಆಡಮ್ಸ್ ಮತ್ತು ಡನ್‍ಹ್ಯಾಮ್ ಎಂಬ ಖಗೋಳವಿe್ಞÁನಿಗಳು ಡಾಪ್ಲರ್ ವಿಧಾನ ಅನುಸರಿಸಿ ಗ್ರಹದ ವಾಯುಮಂಡಲದ ವಿಶ್ಲೇಷಣೆ ಮಾಡಿದ್ದಾರೆ (1933). ಭೂವಾಯುಮಂಡಲದಲ್ಲಿಯ 1%ರ 1/10 ಅಂಶಕ್ಕಿಂತಲೂ ಕಡಿಮೆ. ಆಕ್ಸಿಜನ್ ಮಂಗಳವಾಯುಮಂಡಲದಲ್ಲಿರುವುದನ್ನು ಲೆಕ್ಕಹಾಕಿದ್ದಾರೆ. ಗ್ರಹದ ಮೇಲೆ ಇರುವ ಕುಳಿಗಳು, ವಿಶಾಲ ಬರಡು ಪ್ರದೇಶಗಳು, ಹಳ್ಳಗಳು, ಕಾಲುವೆಗಳಂಥ ರಚನೆಗಳೂ, ಬೆಟ್ಟಗಳು, ಏಣುಗಳು, ಕಣಿವೆಗಳು, ಜ್ವಾಲಾಮುಖಿಗಳು, ಧ್ರುವ ಪ್ರದೇಶಗಳು ಮೊದಲಾದವಕ್ಕೆ ಅವನ್ನು ಕುರಿತು ಅಧ್ಯಯನ ವೀಕ್ಷಣೆ ನಡೆಸಿದ ಸಂಶೋಧಕರ, ಖಗೋಳವಿe್ಞÁನಿಗಳ ಹೆಸರುಗಳನ್ನು ಕೊಟ್ಟಿದೆ. ಈ ಸ್ಥಳಗಳ ಖಗೋಳೀಯ ಅಕ್ಷಾಂಶ ಮತ್ತು ರೇಖಾಂಶಗಳನ್ನು ಗುರುತಿಸಲಾಗಿದೆ.

	ಮಂಗಳದ ಅನ್ವೇಷಣೆಗಾಗಿ ಸೋವಿಯತ್ ರಷ್ಯ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಆಕಾಶನೌಕೆಗಳನ್ನು ಉಡಾಯಿಸಿವೆ. ಈ ಗ್ರಹ ಶೋಧನಾ ನೌಕೆಗಳಿಂದ ಭೂಮಿಗೆ ಮರಳಿಬಂದಿರುವ ಮಾಹಿತಿಗಳು ಮತ್ತು ಛಾಯಾಚಿತ್ರಗಳು ಗ್ರಹದ ನಿಜಸ್ವರೂಪದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿವೆ. ಪುಟ 949ರಲ್ಲಿ ಕೊಟ್ಟಿರುವ ಯಾದಿಯಲ್ಲಿ 1962-76ರ ಅವಧಿಯಲ್ಲಿ ಗ್ರಹಶೋಧನ ನೌಕೆಗಳಿಂದ ಒದಗಿದಮಾಹಿತಿ ಇತ್ಯಾದಿ ವಿವರಗಳನ್ನು ಕ್ರೋಡೀಕರಿಸಿದೆ.

	ಅಮೆರಿಕ 1964ರಲ್ಲಿ ಉಡಾಯಿಸಿದ ಮ್ಯಾರಿನರ್ 4 ಆಕಾಶನೌಕೆ ಸುಮಾರು 10,000 ಕಿಮೀ ದೂರದಲ್ಲಿ ಮಂಗಳಗ್ರಹವನ್ನು ಹಾದು ಗ್ರಹದ ಮೇಲ್ಮೈ ವಿವರಗಳನ್ನು ಕಾಣಿಸುವ 21 ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿತು. ಅಧಿಕ ಕುಳಿಗಳಿಂದ ಕೂಡಿದ ಗ್ರಹಪ್ರದೇಶವೊಂದರ ಮೇಲ್ಮೈ ಸ್ವರೂಪವನ್ನು ಈ ಚಿತ್ರಗಳು ತೋರಿಸಿವೆ. 1971ರಲ್ಲಿ ಉಡಾಯಿಸಲಾದ ಮ್ಯಾರಿನರ್ 9 ಆಕಾಶನೌಕೆ ಈ ಹಿಂದಿನ ನೌಕೆಗಳು ರವಾನಿಸಿದ ಚಿತ್ರಗಳ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ಭೂಮಿಗೆ ರವಾನಿಸಿತು. ಸುಮಾರು 1400 ಕಿಮೀ ದೂರದಲ್ಲಿ ತೆಗೆದ ಗ್ರಹಮೇಲ್ಮೈಯ ಸುಮಾರು 7329 ಛಾಯಾಚಿತ್ರಗಳು ಒದಗಿವೆ. ಗ್ರಹಸಾಮೀಪ್ಯದ (ಎನ್‍ಕೌಂಟರ್) ಸಮಯದಲ್ಲಿ ಗ್ರಹದ ಮೇಲೆ ದೂಳಿನಿಂದ ಒಡಗೂಡಿದ ವಾಯುಪ್ರವಾಹ ಉಂಟಾಗಿ ನೌಕೆ ಚಿತ್ರಗಳನ್ನು ತೆಗೆಯುವುದು ಸಾಧ್ಯವಾಗದೆ ಗ್ರಹದ ಉಪಗ್ರಹದತ್ತ ತನ್ನ ಕೆಮರವನ್ನು ತಿರುಗಿಸಿತು. ಈ ಮೊದಲು ಒದಗಿದ ಚಿತ್ರಗಳಿಂದ ಬೆಟ್ಟಗಳೂ, ಮರಭೂಮಿಯಂಥ ವಿಶಾಲ ಪ್ರದೇಶಗಳೂ ಮರಳಿನಿಂದ ಒಡಗೂಡಿದ ದಿಬ್ಬಗಳೂ ಇವೆಲ್ಲ ಗ್ರಹದ ಮೇಲೆ ಇರುವುದು ತಿಳಿಯಿತು. ಕುಳಿಗಳ ಗೋಡೆಗಳು ಮಾರುತಗಳಿಂದ ಕ್ಷಯಿಸಿರುವುದು ಕಂಡುಬಂದಿದೆ. ಪರ್ವತಗಳೂ ಎತ್ತರದ ಸಮತಟ್ಟು ಪ್ರದೇಶಗಳೂ ಇರುವೆಡೆಯಲ್ಲಿ ಬೃಹತ್ ಕಾಲುವೆಗಳೋ ಕಮರಿಗಳೋ ಇರುವುದು ತಿಳಿಯಿತು. ಕೋಪ್ರಟೀಸ್ ಮಹಾಕಮರಿ ಗ್ರಹಸಮಭಾಜಕದ 1/6ರಷ್ಟು ಉದ್ದಕ್ಕೆ ವ್ಯಾಪಿಸಿಕೊಂಡಿದೆ. ಗ್ರಹದ ಮೇಲೆ ಇರುವ ಅತ್ಯುನ್ನತ ಜ್ವಾಲಾಮುಖಿ ಒಲಿಂಪಸ್ ಮಾನ್ಸ್. ಇದರ ಎತ್ತರ 25 ಕಿಮೀ. ತಳದ ವ್ಯಾಸ 600 ಕಿಮೀ. ಭೂಮಿಯಿಂದ ಇದನ್ನು ವೀಕ್ಷಿಸಿದರೆ ಶ್ವೇತ ಬಿಂದುವಿನಂತೆ ಕಾಣುತ್ತದೆ. 1973ರಲ್ಲಿ ಉಡಾವಣೆಗೊಂಡ ಮ್ಯಾರಿನರ್ 6 ಮತ್ತು ಮ್ಯಾರಿನರ್ 7 ಆಕಾಶ ನೌಕೆಗಳು ಗ್ರಹಮೇಲ್ಮೈಯ ಹೆಚ್ಚಿನ ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿದುವು. ಕುಳಿಗಳ ಸಂಖ್ಯೆ, ಗಾತ್ರ ಮುಂತಾದವು ಚಂದ್ರಕುಳಿಗಳ ಸಂಖ್ಯೆ, ಗಾತ್ರದವನ್ನು ಹೋಲುವಷ್ಟರ ಮಟ್ಟಿಗಿವೆ ಎಂಬುದೂ ತಿಳಿಯಿತು. ಇವುಗಳ ಅಧ್ಯಯನದಿಂದ ಮಂಗಳದ ವಯಸ್ಸು 3.5(109 ವರ್ಷಗಳು ಎಂದು ಲೆಕ್ಕಹಾಕಲಾಗಿದೆ. 

	ಸುಮಾರು 3500 ದಶಲಕ್ಷ ವರ್ಷ ಪ್ರಾಚೀನದಿಂದಲೂ ಗ್ರಹದ ಮೇಲೆ ಜ್ವಾಲಾಮುಖಿ ಚಟುವಟಿಕೆಗಳು ನಡೆದು ಬರುತ್ತಿರುವುದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ವ್ಯಾಲಿಸ್ ಮ್ಯಾರಿನರೀಸ್ ಎಂಬುದು ಗ್ರಹದ ಮೇಲಿನ ಅತ್ಯಧಿಕ ಉದ್ದದ ಕಣಿವೆಯ ವ್ಯವಸ್ಥೆ. ಉದ್ದ ಸುಮಾರು 4000 ಕಿಮೀ; ಗರಿಷ್ಠ ಅಗಲ 200ಕಿಮೀ; ಅತ್ಯಧಿಕ ಆಳ ಸುಮಾರು 6 ಕಿಮೀ. ಇವಲ್ಲದೆ 1000 ಕಿಮೀಗಳಿಗಿಂತಲೂ ಹೆಚ್ಚು ಉದ್ದದ, ಕಾಲುವೆಯೋಪಾದಿಯ ರಚನೆಗಳೂ ಉಂಟು. ನದೀಪಾತ್ರಗಳನ್ನು ಹೋಲುವ ಪ್ರದೇಶಗಳೂ ಇವೆ. ಗ್ರಹದ ಎರಡು ಉಪಗ್ರಹಗಳನ್ನು (ಡೀಮೋಸ್, ಪೋಬಾಸ್) ಮ್ಯಾರಿನರ್ 9 ನೌಕೆ ಛಾಯಾಚಿತ್ರೀಕರಿಸಿಕೊಂಡು ಅವುಗಳ ಸ್ವರೂಪವನ್ನೂ ಆಘಾತದಿಂದ ಉಂಟಾದ ಕುಳಿಗಳ ವಿನ್ಯಾಸವನ್ನೂ ತೋರಿಸಿಕೊಟ್ಟಿದೆ. ಗ್ರಹದ ಆಕಾರ ಅಂಜೂರ ಹಣ್ಣಿನಂತೆ ಇದೆ ಎಂಬುದನ್ನು ಮ್ಯಾರಿನರ್ 9 ನೌಕೆ ತಿಳಿಸಿದೆ. ಮಂಗಳದ ಮೇಲ್ಮೈವಸ್ತುವಿನ ಮೊತ್ತಮೊದಲ ವಿಶ್ಲೇಷಣೆಯನ್ನು ವೈಕಿಂಗ್ 1 ನೌಕೆಯ ಇಳಿಭಾಗ ನಡೆಸಿತ್ತು. ಮೇಲ್ಮೈ ವಸ್ತುವಿನಲ್ಲಿ 16% ಕಬ್ಬಿಣ, 15-30% ಸಿಲಿಕಾನ್, 3-8% ಕ್ಯಾಲ್ಸಿಯಮ್, 2-7% ಅಲ್ಯೂಮಿನಿಯಮ್, 0.25-1.5% ಟೈಟಾನಿಯಮ್ ಇವೆಯೆಂದು ಗೊತ್ತಾಗಿದೆ. ವೈಕಿಂಗ್ 2 ನೌಕೆಯಿಂದ ವ್ಯಕ್ತಪಟ್ಟದ್ದು ಇದೇ ಪರಿಯದಾಗಿತ್ತು. ವೈಕಿಂಗ್ 1ರ ಇಳಿಭಾಗ ಪೈರೋಲಿಟಿಕ್ ವಿಸರ್ಜನೆ (ಪೈರೊಲಿಟಿಕ್ ರಿಲೀಸ್), ಲೇಬಲ್ಡ್ ವಿಸರ್ಜನೆ ಮತ್ತು ಅನಿಲ ವಿನಿಮಯ ಈ ಪ್ರಮುಖ ಪ್ರಯೋಗಗಳನ್ನು ಗ್ರಹದ ಮೇಲೆ ನಡೆಸಿತು. ಆದರೆ ಯಾವುದೇ ರೂಪದ ಜೀವದ ಅಸ್ತಿತ್ವದ ಸಾಧ್ಯತೆಯ ಬಗ್ಗೆ ನಡೆಸಿದ ಈ ಪ್ರಯೋಗಗಳಿಂದ ನಿಶ್ಚಿತ ಅಂಶವೇನೂ ತಿಳಿಯಲಿಲ್ಲ.

	ಮಂಗಳದ ಉಪಗ್ರಹಗಳನ್ನು ಗ್ರಹ ಅನುಕೂಲಕರ ವಿಯುತಿ ಸ್ಥಾನದಲ್ಲಿದ್ದಾಗ (1877) ಅಸಾಫ್‍ಹಾಲ್ ಎಂಬವ ಆವಿಷ್ಕರಿಸಿ ಅವನ್ನು ಪೋಬಾಸ್ (ಹೆದರಿಕೆ ಎಂದು ಅರ್ಥ) ಮತ್ತು ಡೀವೋಸ್ (ಗಾಬರಿ ಎಂದು ಅರ್ಥ) ಎಂದು ಹೆಸರಿಸಿದ. ಗ್ರಹದ ಕೇಂದ್ರದಿಂದ ಪೋಬಾಸ್ 9300 ಕಿಮೀ ದೂರದಲ್ಲಿದೆ. ಪರಿಭ್ರಮಣಾವಧಿ 7ಗಂಟೆ 39 ಮಿನಿಟುಗಳು. ಡೀಮೋಸ್ ಗ್ರಹಕೇಂದ್ರದಿಂದ 23,400 ಕಿಮೀ ದೂರದಲ್ಲಿದೆ. ಪರಿಭ್ರಮಣಾವಧಿ 30 ಗಂಟೆ 18 ಮಿನಿಟುಗಳು. ಪೋಬಾಸಿನ ಆಕಾರ ಹೆಚ್ಚುಕಡಿಮೆ ದೀರ್ಘವೃತ್ತಕಲ್ಪದಂತೆ. ದೀರ್ಘಾಕ್ಷದ ಉದ್ದ ಸುಮಾರು 25ಕಿಮೀ; ಹ್ರಸ್ವಾಕ್ಷದ್ದು ಸುಮಾರು 21 ಕಿಮೀ. ಇದರ ಕುಳಿಗಳು ಬಲು ಪ್ರಾಚೀನ. ಡೀಮೋಸ್ ಸರಿಸುಮಾರು ಗೋಳಾಕಾರದಲ್ಲಿದೆ. ಮಾಧ್ಯವ್ಯಾಸ ಸುಮಾರು 12.5 ಕಿಮೀ. ಇದು ಮಂಗಳಾಕಾಶದ ಅಡ್ಡ ಪಶ್ಚಿಮದಿಂದ ಪೂರ್ವಕ್ಕೆ ಹಾಯುತ್ತದೆ. ಇದರ ಮೇಲೂ ಕುಳಿಗಳಿವೆ. ಈ ಉಪಗ್ರಹಗಳು ಪೂರ್ವಕ್ಕೆ ಹಾಯುತ್ತದೆ. ಇದರ ಮೇಲೂ ಕುಳಿಗಳಿವೆ. ಈ ಉಪಗ್ರಹಗಳು ಕ್ಷುದ್ರಗ್ರಹಗಳನ್ನು ಹೋಲುತ್ತವಾದ್ದರಿಂದ ಅವನ್ನು ಹಿಡಿದಿಟ್ಟ ಚಂದ್ರರು ಎಂದು ಹೇಳಲಾಗಿದೆಯಾದರೂ ಈ ಹೇಳಿಕೆಗೆ ಸಮರ್ಥನೆಗಳಾವುವೂ ಇಲ್ಲ. ಮಂಗಳಗ್ರಹದ ಮೇಲೆ ನೆಲೆನಿಂತ ವೀಕ್ಷಕನಿಗೆ ಈ ಉಪಗ್ರಹಗಳ ಗ್ರಹಣಗಳು ಆಗಾಗ್ಗೆ ಘಟಿಸುವ ಸರ್ವೇಸಾಮಾನ್ಯ ವಿದ್ಯಮಾನಗಳು. ಇವು ಮಾತೃಗ್ರಹಕ್ಕೆ ಯಾವಾಗಲೂ ತಮ್ಮ ಒಂದೇ ಮುಖ ತೋರಿಸುತ್ತಿರುತ್ತವೆ. ಚಂದ್ರನಿಗೆ ಇರುವಂಥ ಪಾಶ್ರ್ವಆಂದೋಲನ (ಲೈಬ್ರೇಷನ್) ಇವಕ್ಕೂ ಉಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ